ಹಾಸನ ಜಿಲ್ಲೆಯಲ್ಲಿ ಕಳೆದ 4 ದಿನಗಳಿಂದ ಧಾರಾಕಾರವಾಗಿ ಮಳೆಯಾಗ್ತಿದೆ. ಭಾರೀ ಮಳೆಯಿಂದಾಗಿ ನುಗ್ಗೇಹಳ್ಳಿ ಗ್ರಾಮದ ಹೀರೆಕೆರೆ ಕೋಡಿ ಬಿದ್ದಿದ್ದು ಮನೆ, ಅಂಗಡಿಗಳಿಗೆ ನೀರು ನುಗ್ಗಿದೆ. ನುಗ್ಗೇಹಳ್ಳಿ-ಹಿರಿಸಾವೆ-ಬಾಣನಕೆರೆ ಮುದ್ದನಹಳ್ಳಿ ಗ್ರಾಮಗಳಿಗೆ ರಸ್ತೆ ಸಂಪರ್ಕ ಕಡಿತಗೊಂಡಿತ್ತು. ಬದಲಿ ಮಾರ್ಗದಲ್ಲಿ ವಾಹನ ಸವಾರರು ಸಂಚರಿಸುತ್ತಿದ್ದಾರೆ. ಚನ್ನರಾಯಪಟ್ಟಣ ತಾಲೂಕಿನಲ್ಲಿ ಅತಿ ಹೆಚ್ಚು ಮಳೆಯಾಗುತ್ತಿದೆ. ತಾಲೂಕಿನ ಬಾಗೂರು ಕೆರೆ ಕೋಡಿ ಬಿದ್ದು ಗುಲಸಿಂದ, ಬಾಳೆಕೊಪ್ಪಲು ಗ್ರಾಮಗಳ ರೈತರ ಜಮೀನಿನ ಮೇಲೆ ನೀರು ಹರಿಯುತ್ತಿದ್ದು ಹೊಲ, ಗದ್ದೆ, ತೆಂಗಿನ ತೋಟಗಳು ಜಲಾವೃತವಾಗಿವೆ. <br /><br />#publictv #rain #hassan
